Posts

Showing posts from November, 2021

ಆಸ್ಕರ್ ಶಿಂಡ್ಲರ್ – ಸಂತನಾದ ಸ್ವಾರ್ಥಿ - ಪಾಲಹಳ್ಳಿ ವಿಶ್ವನಾಥ್ Palahalli Vishwanath

Image
  ಆಸ್ಕರ್ ಶಿಂಡ್ಲರ್ – ಸಂತನಾದ ಸ್ವಾರ್ಥಿ   ಪಾಲಹಳ್ಳಿ ವಿಶ್ವನಾಥ್ ಇಂದು ನೀವು ಇಸ್ರೇಲಿನ ಜೆರುಸಲೆಮಿನ ಬೆಟ್ಟಕ್ಕೆ ಹೋಗಿ ಅಲ್ಲಿ ಸಮಾಧಿಗಳನ್ನು ನೋಡಿದರೆ , ಅನೇಕ ಸಮಾಧಿಗಳ ಮೆಲೆ ಪುಟ್ಟ ಪುಟ್ಟ ಕಲ್ಲುಗಳು ಇಟ್ಟಿರುವುದನ್ನು ಕಾಣಬಹುದು ; ನಾವು ಹೂವುಗಳನ್ನಿಡುವ ತರಹ ಯಹೂದಿಗಳು ಈ ಕಲ್ಲುಗಳನ್ನು ಗೌರವಾರ್ಥವಾಗಿ ಇಡುತ್ತಾರೆ . ಗಮನಿಸಿದಾಗ ಒಂದು ಸಮಾಧಿಯ ಮೇಲೆ ಬಹಳ ಕಲ್ಲುಗಳು ಕಾಣುತ್ತವೆ . ಹತ್ತಿರ ಹೋಗಿ ಬರೆದಿರುವುದನ್ನು ನೋಡಿದರೆ – ‘ ಆಸ್ಕರ್ ಶಿಂಡ್ಲರ್ (1906-1974)   1200 ಯಹೂದಿಗಳನ್ನು ರಕ್ಷಿಸಿದ ಮಹಾನುಭಾವ ‘ ಎಂದು ಬರೆದಿರುತ್ತದೆ . ಶಿಂಡ್ಲರ್ ? ಪಕ್ಕ ಜರ್ಮನ್ ಹೆಸರಲ್ಲವೆ ? ಹಾಗಿದ್ದೂ ಇಡೀ ಯಹೂದಿ ಜನಾಂಗದ ಗೌರವಕ್ಕೆ ಹೇಗೆ ಪಾತ್ರನಾದ ? -------------------------------------------------------------------------------------------     ಜರ್ಮನ್ ಸೇನೆಗೆ ಮತ್ತು ನಾಜಿ ಪಕ್ಷಕ್ಕೆ ಗೂಢಚಾರನ ಕೆಲಸ ಮಾಡುತ್ತಿದ್ದ ಆಸ್ಕರ್ ಶಿಂಡ್ಲರ್ ತನ್ನ 31 ನೆಯ ವಯಸ್ಸಿನಲ್ಲಿ   ದುಡ್ಡು ಮಾಡ ಲು 1939 ರಲ್ಲಿ ಪೋಲೆಂಡಿನ ಕ್ರಾಕೋಗೆ ಬಂದಿಳಿದ . 1)       ಹಿನ್ನೆಲೆ : ಚಿತ್ರಗಳು       ಮೊದಲನೆಯ ಮಹಾಯುದ್ಧದ ನಂತರ ಜರ್ಮನಿಯಲ್ಲಿ ಅಡಾ...