ಜೀವ್ಸ್ ಕೆಲಸಕ್ಕೆ ಸೇರಿದ ಪಾಲಹಳ್ಳಿ ವಿಶ್ವನಾಥ್ Palahalli Vishwanath
ಜೀವ್ಸ್ ಕೆಲಸಕ್ಕೆ
ಸೇರಿದ
ಪಾಲಹಳ್ಳಿ ವಿಶ್ವನಾಥ್
ನೀವು ಆಗಲೆ
ನನ್ನಕೆಲವು ಜೀವ್ಸ್ ಕಥೆಗಳನ್ನು ಓದಿದೀರ ಅಲ್ಲವೆ. ಆದರೆ ಜೀವ್ಸ್ ನನ್ನ್ ಜೀವನದಲ್ಲಿ ಹೇಗೆ ಸೇರಿಕೊಂಡ
ಅಂತ ನಿಮಗೆ ಸರಿಯಾಗಿ ಹೇಳಿಲ್ಲ. ಈಗ ಹೆಳ್ತೀನಿ ಕೇಳಿ
!
ನನ್ನ ದೊಡ್ಡಮ್ಮ ದುರ್ಗಾದೇವಿಯವರಿಗೆ ನನಗೆ ಹೇಗಾದರೂ ಮದುವೆ
ಮಾಡಿಬಿಡಬೇಕೆಂಬ ಹಠ. ದುರ್ಗಾದೇವಿ? ನೆನಪಾಗುತ್ತಿಲ್ಲವೆ? ಅಗಾಥಾ ದೊಡ್ಡಮ್ಮ! ಅವರು ಅಗಾಥಾ ಕ್ರಿಸ್ಟಿ
ಬಹಳ ಓದುತ್ತಿದ್ದರಿಂದ ಅವರ ತಂಗಿ, ನನ್ನ ಚಿಕ್ಕಮ್ಮ ದಮಯಂತಿ , ಅವರನ್ನು ಅಗಾಥಾ ಎಂದು ಕರೆಯಲು ಶುರುಮಾಡಿದ್ದು ಅದೇ ಹೆಸರು ಅಂಟುಕೊಂಡಿತು. ಹೌದು, ಲವಕುಶರ ತಾಯಿ ! ಕುಹಕ
ಬೇಡ! ಅವರನ್ನು ಸೀತಾದೇವಿ ಎಂದು ಹೊಸದಾಗಿ ಹೆಸರಿಸುವ ಅಗತ್ಯವಿಲ್ಲ. ನನ್ನ ತಾಯಿ ಈಗೆ ಇಲ್ಲವಾದ್ದರಿಂದ
ಅಗಾಥಾ ದೊಡ್ಡಮ್ಮನಿಗೆ ತಾನೊಬ್ಬಳೇ ನನ್ನ ಹಿತೈಷಿ ಎಂದೆನಿಸಿಬಿಟ್ಟಿದೆ. ನಾನು ವ್ಯಥಾ ಕಾಲಹರಣಮಾಡುತ್ತಿದ್ದೇನೆಂದೂ
ನನ್ನ ಜೀವನಕ್ಕೆ ಯಾವ ಗುರಿಯೂ ಇಲ್ಲವೆಂದು ನನಗೆ ಭಾಷಣ ಕೊಡುತ್ತಲೇ ಇರುತ್ತಾರೆ. ಅಷ್ಟೇ ಇದ್ದರೆ ಪರವಾಗಿರುತ್ತಿರಲಿಲ್ಲ.
ಅವರಿಗೆ ಗೊತ್ತಿರುವುವುರಲ್ಲಿ ಯಾವುದಾದರೂ ಮದುವೆಯಾಗದ ಯುವತಿಯರು ಕಾಣಬಂದರೆ ಅವರಿಗೆ ತಕ್ಷಣ ನನ್ನ
ನೆನಪು ಬಂದು ಹೇಗಾದರೂ ನಮ್ಮನ್ನು ಕೂಡಿಸಲು ನೋಡುತ್ತಾರೆ. ನನಗೆ ಇರದ ಗುಣಗಳನ್ನೆಲ್ಲಾ ನನ್ನ ಮೇಲೆ
ಹೇರಿ ಹುಡುಗಿಯವರಿಗೆ ನನ್ನ್ಪಪರಿಚಯ ಮಾಡಿಸುತ್ತಾರೆ. ನನ್ನ ಅದೃಷ್ಟ ! ಇದುವರೆವಿಗೆ ಯಾವುದೂ ಕೂಡಿ
ಬಂದಿಲ್ಲ. ಆದರೆ ಈಗ?
ಆರತಿಯ ಬಗ್ಗೆ ಹೆಚ್ಚು ತಕರಾರು ಮಾಡುವುದೂ ಕಷ್ಟ. ವಿದ್ಯೆ,ರೂಪ
ಎಲ್ಲ ಇರುವ ಯುವತಿ. ಮಂತ್ರಿ ಮನೋಹರಯ್ಯನವರ ಮಗಳು ಬೇರೆ ! ಆದರೆ ಅವಳು ಬಹಳ ‘ ಸೀರಿಯಸ್’ ಹುಡುಗಿ.
ಸ್ವಲ್ಪವೂ ಹಾಸ್ಯ ಪ್ರಜ್ನೆ ಇಲ್ಲ. ನಾನೋ, ನಿಮಗೇ ಗೊತ್ತು ! ಚಿಕ್ಕಂದಿನಲ್ಲಿ ಸೀರಿಯಸ್
ಅಂದರೆ ಯಾರೋ ರೋಮಿನ ಅಥವಾ ಗ್ರೀಸಿನ ಹೀರೋ
ಅಂದುಕೊಂಡಿದ್ದೆ. ಗಹನವಾದ ವಿಷಯಗಳು ತಲೆಯ ಒಳಗೇ ಪ್ರವೇಶಿಸುವುದೇ ಇಲ್ಲ. ಅದಕ್ಕೇ ಏನೋ ಆರತಿ ನನ್ನನ್ನು
‘ ಬಹಳ ಚೆಲ್ಲು’ ಅಂತಾಳೆ. ಯಾವಾಗಲು ಏನಾದರೂ ಓದುತ್ತಿರುತ್ತಾಳೆ.
ಅದೂ ಧರ್ಮ, ತತ್ವಶಾಸ್ತ್ರ (ಅಂದರೆ ಫಿಲಾಸಫಿ ಅಂತ ನನಗೆ ಆಮೇಲೆ ತಿಳೀತು) ಇತ್ಯಾದಿ. ಅದೆಲ್ಲಾ ಈ ವಯಸ್ಸಿನಲ್ಲಿ
ಯಾಕೆ ಅಲ್ವಾ? ಒಂದು ಪುಸ್ತಕ ಕೊಟ್ಟಿದಾಳೆ. ಪ್ರಶ್ನೆನೂ ಕೇಳ್ತೀನಿ ಅಂತ ಹೆದರಿಸಿದ್ದಾಳೆ.
ಯಾವುದೋ ಉಪನಿಶತ್ ಅಂತೆ . ಕಠೋಪನಿಶತ್ ಅಂತೆ ಹೆಸರು. ನನಗೆ ಬರೆ ‘ ಪನಿಶ್ ’ ಕೇಳಿಸಿತು
ಆರತಿ
ಈ ಪುಸ್ತಕ ಕೊಟ್ಟು ಎರಡು ದಿವಸ ಆಯಿತು. ಶುರುಮಾಡೋಣ ಅಂತ ಎರಡು ಮೂರು ಸತಿ ಪ್ರಯತ್ನ ಮಾಡಿದೆ. ಆಗಲೇ
ಇಲ್ಲ . ಸರಿ, ಮೂರನೇ ದಿನ . ಆ ಪುಸ್ತಕ ಇಟ್ಟುಕೊಂಡು ವರಾಂಡಾದಲ್ಲಿ ಕುಳಿತಿದ್ದೆ . ಯಾರೋ ಒಳಗೆ ಬಂದು
‘ ‘ನಮಸ್ಕಾರ ಸಾರ್, ಏಜೆನ್ಸಿಯವರು ಕಳಿಸಿದಾರೆ. ಹೆಸರು
ಜೀವ್ರಾಜ್ ‘ ಎಂದರು. ಹೌದು, ನನಗ ಕೆಲಸದವರೊಬ್ಬರು ಬೇಕಿತ್ತು. ಬರೇ ಕೆಲಸದವರಲ್ಲ.
ಒಂದು ತರಹ ಕಾರ್ಯದರ್ಶಿ. ಒಳಗೆ, ಹೊರಗೆ ಕೆಲಸಮಾಡಬೇಕು. ಬಂದವನು ನಾನು ಓದಲು ಇಟ್ಟುಕೊಂಡಿದ್ದ ಪುಸ್ತಕ
ನೋಡಿದ “ ಕಠೋಪನಿಶತ್ ಓದ್ತಿದೀರಾ?’ ಎಂದ. ‘ ಶುರು ಮಾಡಿದೀನಿ’ ಎಂದೆ. “ ಓದಿ ಸಾರ್ ! ಆ ನಚಿಕೇತ
ಎಂತಹ ಪ್ರಶ್ನೆಗಳನ್ನು ಕೇಳ್ತಾನೆ ಅಂತ. ಬಿಡಿ, ಸರ್ಪ್ರೈಸ್ ನಾನು ಕೆಡಸೋಲ್ಲ ‘ ಮಾತು ಸ್ವಲ್ಪ ಹೆಚ್ಚೇ
ಆಯಿತು ಎಂದುಕೊಂಡೆ. ‘ ಎಲ್ಲಿ , ಒಳಗೆ ಹೊಗಿ , ಕಾಫಿ ಮಾಡಿಕೊಂಡು
ಬಾ ‘ ಎಂದೆ. ಹತ್ತೇ ನಿಮಿಷಗಳಲ್ಲಿ ಬಿಸಿ ಬಿಸಿ ಕಾಫಿ ತಂದುಕೊಟ್ಟ. ಬಹಳ ಚೆನ್ನಾಗಿತ್ತು. ಹಾಗೇ ಮಾತಾಡಿಸ್ತಾ
ಹೋದೆ. ಕಡೇಲಿ ಒಂದು ಗಣಿತದ ಪ್ರಶ್ನೆ ಕೆಳಿದೆ : 18+48= . ನಾನು ಮುಗಿಸೋದರಲ್ಲೆ 66 ಅಂದು ಬಿಟ್ಟ. ಪಾಪ! ಸ್ವಲ್ಪ ಸಮಯ ತೊಗೊಬಹುದಿತ್ತು.
ಒಂದು ತಪ್ಪು ತಾನೇ ! ಅದು ಅವನೂ ಮನುಷ್ಯ ಅಂತ ತೋರಿಸುತ್ತೆ. ಒಟ್ಟಿನಲ್ಲಿ ಅವನು ನನಗೆ ಸರಿಯಾಗಿದಾನೆ. ಕೆಲಸ ಮಾಡ್ತೀನಿ ಅಂತ ಒಪ್ಪಿಕೊಂಡ. ‘ ಜೀವ್ಸ
ಅಂತ ಕರೀಲಾ ‘ ಅಂತ ಕೇಳಿದೆ. ‘ಸರಿ, ಸಾರ್’ ಎಂದ.
ಅದರೆ ಆರತಿಗೆ ಜೀವ್ಸ್ ಇಷ್ಟವೇ ಆಗಲಿಲ್ಲ. ಎರಡು ಮೂರು
ಸತಿ ಅವನು ಅವಳನ್ನು ತಿದ್ದಿದ. ಯಾವುದೊ ಮಿಲಿಂದ ಪ್ರಶ್ನೆ ಅಂತ ನನಗೆ ಬೋರ್ ಮಾಡ್ತಾ ಇದ್ದಳು. ಯಾರೋ
ನಾಗಾರ್ಜುನ ಅಂತೆ. ಅದನ್ನು ಕೇಳಿ ಜೀವ್ಸ’ ಮೇಡಮ್, ಅದು ನಾಗಸೇನ, ನಾಗಾರ್ಜುನ ಅಲ್ಲ’ ಎಂದ. ಆಗ ನೀವು
ಅವಳ ಕೋಪ ನೋಡಬೇಕಿತ್ತು. ಇನ್ನೊಂದು ಸತಿ ಯಾವುದೋ
ಸಿನೆಮಾದಲ್ಲಿ ದಿಲೀಪ ಕುಮಾರ್ ಅಂತ ಶುರುಮಾಡಿದಳು. ಹತ್ತಿರವೇ ಇದ್ದ ಜೀವ್ಸ್ ‘ ಮೇಡಮ್, ಅದು ದಿಲೀಪ ಸಾಬ್ ಅಲ್ಲ,
ದೇವ್ ಸಾಬ್’ ಎಂದ. ಅಂತೂ ಏನಾದರೂ ಅವರಿಬ್ಬರಿಗೂ ಚಕಮಕಿ
ನಡೆಯುತ್ತಿರುತ್ತದೆ. ಹಾಗಾಗಿ ನಮ್ಮ ಮದುವೆಯಾದ ಮುಂದಿನ ದಿನವೇ ಅವನನ್ನು ಬಿಢಿಸಿಬಿಡಿ ಎಂದೂ ಆಗಾಗ್ಗೆ
ಹೇಳುತ್ತಿರುತ್ತಾಳೆ. ಮುಂದಿನ ಸತಿ ನೀವು ನನ್ನ ನೋಡಿದಾಗ ಮಿಲಿಂದ ಯಾವ ಸಿನೆಮಾದಲ್ಲಿ ಮಾಡ್ತಾ ಇದ್ದ
ಅಂತ ಕೇಳಬೇಡಿ. ಒಟ್ಟಿನಲ್ಲಿ ಮುಖ್ಯವಾಗಿ ನನಗೆ ಮದುವೆಯಾಗುವ ಯಾವ ಇಚ್ಛೆಯೂ ಇರಲಿಲ್ಲ..ಏನೋ
ದೊಡ್ಡಮ್ಮನ ಬಲವಂತಕ್ಕೆ ಆಗಾಗ್ಗೆ ಆರತಿಯನ್ನು ಹೋಗಿ
ನೋಡ್ತಾ ಇದ್ದೆ.
ಹೀಗೇ
ನಡೆಯುತ್ತಿದ್ದಾಗ ನನ್ನ ಚಿಕ್ಕಪ್ಪ ಚಾಚಾ ಚಂದ್ರು ತಮ್ಮ ಜೀವನಚರಿತ್ರೆಯನ್ನು ಬರೆದಿಟ್ಟರು.ಪೂರ್ತಿ
ಏನಲ್ಲ. ಮೊದಲ 20-25 ವರ್ಷಗಳ ಬಗ್ಗೆ, ಅವರ ಯೌವನದ ಬಗ್ಗೆ. ನೀವು ಅವರ ಬಗ್ಗೆ ನಾನು ಮಾತನಾಡಿರುವುದನ್ನು ಕೇಳಿದ್ದೀರಾ ಅಲ್ಲವೇ? ಅವರಿಗೆ ಈಗ 70 + ಆದರೆ ಆಡುವುದು ಇನ್ನೂ 20+ರ ತರಹ. ಹಾಗಿದ್ದರೆ ಅವರು ನಿಜವಾಗಿಯೂ 20+ ಇದ್ದಾಗ
ಹೇಗಿದ್ದರು ಎಂದು ಊಹಿಸಬಹುದಲ್ಲವೇ. ಈ ಮಾಹಿತಿ ಏನಕ್ಕೆ ಮುಖ್ಯ ಅಗುತ್ತೆ ಅಂದರೆ ಆರತಿಯ ತಂದೆ ಮನೋಹರಯ್ಯನವರು
ನಮ್ಮ ಚಾಚಾ ಬಹಳ ಸ್ನೇಹಿತರು. ಒಟ್ಟಿಗೆ ಇರ್ತಾ ಇದ್ದರು; ಒಟ್ಟಿಗೆ ತರಳೆ ಕೆಲಸಗಳನ್ನೂ ಮಾಡುತ್ತಿದ್ದರು.
ಆದ್ದದಿಂದ ಆರತಿಗೆ ಚಾಚಾರ ಜೀವನ ಚರಿತ್ರೆಯ ಬಗ್ಗೆ
ಬಹಳ ಯೋಚನೆ ಶುರುವಾಯಿತು ಅದು ಪ್ರಕಟವಾದರೆ ಮನೋಹರಯ್ಯನವರ
ಮಾನ ಉಳಿಯುವದಿಲ್ಲ ಎಂದು ಅವಳಿಗೆ ಭಯವಾಗತೊಡಗಿತು. ಮನೋಹರಯ್ಯನವರು ಈ ಬಾರಿಯೂ ಚುನಾವಣೆಗೆ ನಿಲ್ಲುವವರಿದ್ದರು.
ಅವರ ಯೌವನದ ಲೀಲೆಗಳನ್ನು ಜನ ಕೇಳಿದರೆ ಅವರು ಸೋಲುವುದು
ಖಂಡಿತ ಎನಿಸಿತು ಅವಳಿಗೆ. ಚಾಚಾರವರ ಮಾನದ ಬಗ್ಗೆಯೂ ಯಾರೂ ಏಕೆ ಯೋಚಿಸುತ್ತಿಲ್ಲ ಎಂದು ನೀವು ಕೇಳಬಹುದಲ್ಲವೇ? ಅವರಿಗೆ
ತಮ್ಮ ಮಾನಕಳೆದುಕೊಳ್ಳುವ ಬಗ್ಗೆ ಯಾವ ಭಯವೂ ಇರಲಿಲ್ಲ. ಏಕೆಂದರೆ ಅವರೇ ಆಗಾಗ್ಗೆ ಹೇಳುವಂತೆ ‘ ನನಗೆ ಮಾನವೂ ಇಲ್ಲ, ಗೀನವೂ ಇಲ್ಲ’. ಆರತಿ ನನ್ನ ಹತ್ತಿರ ಅವರಿಗೆ ಪ್ರಕಟಿಸೋದು ಬೇಡ ಅಂತ ಹೇಳು ಅಂದಳು. ಬಹಳ ಬಲವಂತ ಮಾಡಿದಮೇಲೆ ಚಾಚಾಗೆ ಹೇಳಿದೆ. ಅವರು ಜೋರಾಗಿ ನಕ್ಕು ಬಿಟ್ಟು ‘ಏನೂ ಆಗೋಲ್ಲ ’ ಅಂದರು. ಹಾಗೇ
ಕರಡು ಪ್ರತಿಯನ್ನು ನನಗೆ ಕಳಿಸುತ್ತಾರೆಂದೂ , ಅವರ ಹತ್ತಿರ ಒಂದೇ ಪ್ರತಿ ಇದೆಯೆಂದೂ ಮತ್ತು ಜಾಗರೂಕತೆಯಿಂದ ಇರಬೇಕೆಂದೂ ಹೇಳಿದರು.
ಅದು ಬಂದ ಮೇಲೆ ನಾನೇ ಬೆಂಗಳೂರಿನಲ್ಲಿರುವ ಅವರ ಪ್ರಕಾಶಕರ
ಆಫೀಸಿಗೆ ತಗೆದುಕೊಂಡು ಹೋಗಿಕೊಡಬೇಕು ಎಂದರು.
ಇದನ್ನು ನಾನು ಆರತಿಗೆ ಹೇಳಿದೆ. ಸರಿ ಎಂದಳು. ಬೆಳಿಗ್ಗೆ ಚಾಚಾಯಿಂದ ಪಾರ್ಸೆಲ್ ಬಂತು. ವರಾಂಡದಲ್ಲೆ ಮೇಜಿನ
ಮೇಲೆ ಇಡಲು ಹೇಳಿದೆ. ಅಷ್ಟರಲ್ಲಿ ಆರತಿಯ ಮನೆಯಿಂದ ಅವಳ ಸಹಾಯಕಿ ಸುಶೀಲ ಬಂದಳು ‘ ಅಮ್ಮಾವ್ರು ಪುಸ್ತಕ ಕಳಿಸಿದಾರೆ ಸಾರ್… ನಾನು ಹೋಗ್ತೀನಿ,
ಜಾಸ್ತಿಕೆಲಸ ಇದೆ ‘ ಎಂದು ಹೊರಟು ಹೋದಳು.ನಾನು ವರಾಂಡಾ ಗೆ ಬಂದು ನೋಡಿದರೆ ಚಾಚಾ ಪಾರ್ಸಲ್ ಮಾಯ! ಸುಶೀಲಾನೇ ತೆಗೆದುಕೊಂಡುಹೋಗಿರಬೇಕು
ಎಂದ ಜೀವ್ಸ್. ಸ್ವಲ್ಪ ಹೊತ್ತಾದ ಮೇಲೆ ಆರತಿಯಿಂದ ಫೋನ್ ಬಂತು
. ನಾನು ಪಾರ್ಸಲ್ ವಾಪಸ್ಸು ಕಳಿಸು ಎಂದು ಕೇಳಿದಾಗ ಅವಳು ನಗುತ್ತಾ ‘ ಸುಶೀಲ ಸುಟ್ಟುಹಾಕಿ ಬಿಟ್ಟಳು’ ಎಂದಳು. ನನಗೆ ಗಾಬರಿಯೂ ಆಯಿತು, ಕೋಪವೂ ಬಂತು ‘ ಪುಸ್ತಕಾನ ಸುಟ್ಟುಹಾಕ್ತಾರಾ?
ಏನು ಸಂಸ್ಕೃತಿ ನಿನ್ನದು? ಇನ್ನು ನಿನ್ನ ನಾನು ನೋಡೋಲ್ಲ’ ಎಂದು ಫೋನ್ ಇಟ್ಟುಬಿಟ್ಟೆ. ಅಂತೂ ಒಳ್ಳೆ ಕಾರಣಾನೇ ಸಿಕ್ತು ಅವಳಿಂದ ಬಿಡಿಸಿಕೊಳ್ಲೋಕೆ! ಆದರೂ ನನಗೆ ಬಹಳ ಬೇಜಾರಾಯತು. ಚಾಚಾಗೆ ಈಗ ಏನು ಹೇಳೋದು?
ನನ್ನ ವ್ಯಥೆಯನ್ನು ಜೀವ್ಸ ಗಮನಿಸಿದ. ‘ ಯೋಚನೆಮಾಡಬೇಡಿ
ಸಾರ್, ನಾನು ಆಗಲೇ ಚಾಚಾ ಚಂದ್ರು ಅವರಿಗೆ ಫೋನ್ ಮಾಡಿದ್ದೆ. ಇನ್ನೊಂದು ಪ್ರತೀನಾ ಯಾರೋ ಹಿತೈಷಿಗಳ
ಹತ್ತಿರ ಕೊಟ್ಟಿದಾರಂತೆ ಕಳಿಸ್ತಾರಂತೆ. ಬಹಳ ಜೋಪಾನ ಅಂದರು. .. ನಾನು ಒಂದು ಹೇಳಬಹುದೆ ಸಾರ್?
‘ ಏನದು?’
‘ ನೀವು ಒಳ್ಳೇದೇ ಮಾಡಿದಿರಿ.ನಿಮಗೆ
ಆರತಿ ಮೇಡಮ್ ಸರಿಹೋಗೋಲ್ಲ ಸಾರ್! ಅವರು ಬೆಳಿಗ್ಗೆ
ಕಳಿಸಿದ ಪುಸ್ತಕ ನೋಡಿದಿರಾ?.. ನಿಮಗಲ್ಲ ಸಾರ್ ಅಂಥ ಪುಸ್ತಕ. ಹೆಸರಾ? ಮಾಂಡ್ಯೂಕೋಪನಿಶದ್’ ‘
ಹೆಸರು ಕೇಳೇ ಎದೆ ನಡುಗಿತು. ಸದ್ಯ ತಪ್ಪಿಸಿಕೊಂಡೆನಲ್ಲ ಅನ್ನಿಸಿತು.
‘ ನಾನು ಓದಿ ಕೊಡಲಾ
ಸಾರ್’ ಎಂದು ಕೇಳಿದ ಜೀವ್ಸ್
“ ಧಾರಾಳವಾಗಿ ! ವಾಪಸ್ಸು
ಕೊಡಬೇಡ. ನೀನೆ ಇಟ್ಕೊ’‘ ಅಂದೆ
ಅಂದಿನಿಂದ ಜೀವ್ಸ್ ನನಗೆ ಖಾಯಂ ಕಾರ್ಯದರ್ಶಿ !
(ಸ್ಫೂರ್ತಿ: ಪಿ.ಜಿ.ವುಡ್
ಹೌಸ್)
-------------------------------------------
Comments
Post a Comment